Posts

ವಕೀಲರ ಹತ್ಯೆ, ಹಲ್ಲೆ ಹಾಗೂ ಪೊಲೀಸ್ ಠಾಣೆಗಳಲ್ಲಿ ಸಿವಿಲ್ ವಿವಾದಗಳ ಇತ್ಯರ್ಥ: ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ಕರ್ನಾಟಕ ಹೈಕೋರ್ಟ್ ಆದೇಶ

Image
  ವಕೀಲರ ಸುರಕ್ಷತೆ, ಪೊಲೀಸರಿಂದ ಗೌರವಯುತ ವರ್ತನೆ, ವಕೀಲರ ರಕ್ಷಣಾ ಕಾಯ್ದೆ ಬಲಪಡಿಸುವುದು ಹಾಗೂ ಪೊಲೀಸ್ ಠಾಣೆಗಳಲ್ಲಿ ಸಮಾನಾಂತರ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಕಡಿವಾಣ ಹಾಕುವ ಕುರಿತು ಮಹತ್ವದ ಕ್ರಮ ಬೆಂಗಳೂರು, ನವೆಂಬರ್ 3, 2026: ರಾಜ್ಯದಲ್ಲಿ ವಕೀಲರ ಮೇಲೆ ಹೆಚ್ಚುತ್ತಿರುವ ಹಲ್ಲೆ, ಬೆದರಿಕೆ ಮತ್ತು ಹತ್ಯೆ ಪ್ರಕರಣಗಳು, ಪೊಲೀಸ್ ಠಾಣೆಗಳಲ್ಲಿ ವಕೀಲರೊಂದಿಗೆ ನಡೆಯುತ್ತಿರುವ ದುರ್ವರ್ತನೆ ಹಾಗೂ ಸಿವಿಲ್ ವಿವಾದಗಳನ್ನು ಪೊಲೀಸ್ ಠಾಣೆಗಳಲ್ಲಿಯೇ ಇತ್ಯರ್ಥಪಡಿಸುವ ಪ್ರವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಈ ವಿಷಯಗಳ ಕುರಿತು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (Suo Motu PIL) ದಾಖಲಿಸುವಂತೆ ಆದೇಶಿಸಿದೆ. ನ್ಯಾಯಮೂರ್ತಿ ಡಿ. ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್ ಅವರನ್ನೊಳಗೊಂಡ ವಿಭಾಗೀಯ ಪೀಠವು ನವೆಂಬರ್ 3ರಂದು ಈ ಮಹತ್ವದ ಆದೇಶ ಹೊರಡಿಸಿದೆ. ವಕೀಲರ ಹತ್ಯೆ ಮತ್ತು ಹಲ್ಲೆ ಪ್ರಕರಣಗಳ ಬಗ್ಗೆ ತೀವ್ರ ಕಳವಳ 2026ರ ಅಕ್ಟೋಬರ್ 9ರಂದು ವಕೀಲ ಶ್ರೀರಾಮ್ ವಿ. ಮತ್ತು ಅಕ್ಟೋಬರ್ 18ರಂದು ವಕೀಲ ಮಂಜುನಾಥ್ ಅವರ ಹತ್ಯೆ ಹಾಗೂ ಅಕ್ಟೋಬರ್ 28ರಂದು ಗೌರಿಬಿದನೂರಿನ ಹಿರಿಯ ವಕೀಲ ವೆಂಕಟರಾಮಣಪ್ಪ ಸಣ್ಣಕ್ಕಿ ಅವರ ಮೇಲಿನ ಕೊಲೆ ಯತ್ನ ಪ್ರಕರಣಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಗಳು ರಾಜ್ಯದ ವಕೀಲ ಸಮುದಾಯದಲ್ಲಿ ಆತಂಕ ಮತ್ತು ಅಭದ್ರತೆಯ ವಾತಾವರಣ ಸೃಷ್ಟಿಸಿವೆ. ...

All-Women Judicial Benches: From 1925 Texas USA Bench to 2026 Dharwad Bench.

Image
  S Basavaraj, Senior Advocate, Bengaluru  The announcement that the Dharwad Bench of the Karnataka High Court will function exclusively with all-women benches on 1 August marks a significant chapter in the history of the Indian judiciary. On that day, the special Saturday sitting of the Court will comprise seven benches with nine women judges each presided over exclusively by women judges. While Indian courts have previously witnessed individual all-women benches, the simultaneous functioning of an entire court with only women judges across all its benches appears to be unprecedented. It is arguably the first instance of a major constitutional court dedicating an entire sitting exclusively to all-women benches. This development is far more than a symbolic gesture. It reflects the steady progress made by women in the legal profession and the judiciary, while also reminding us of the long journey that remains towards achieving equal representation at all levels of the justice d...

ವಕೀಲರ ಪರಿಷತ್ತಿನ ಸದಸ್ಯರ ಸ0ಖ್ಯೆ ಹೆಚ್ಚಳ. ಉನ್ನತಾಧಿಕಾರದ ಚುನಾವಣಾ ಮೇಲ್ವಿಚಾರಣಾ ಸಮಿತಿಯಿ0ದ ಭಾರತೀಯ ವಕೀಲರ ಪರಿಷತ್ತಿನ ಕ್ರಮಕ್ಕೆ ಖ0ಡನೆ. ತಡೆಯಾಜ್ನೆ

Image
ನವದೆಹಲಿ, ಜು. 23: ಭಾರತೀಯ ವಕೀಲರ ಪರಿಷತ್ (BCI) 19.07.2026ರಂದು ಅಂಗೀಕರಿಸಿದ ರಾಜ್ಯ ವಕೀಲರ ಪರಿಷತ್ತುಗಳ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ನಿರ್ಣಯವನ್ನು ಪ್ರಸ್ತುತ ಚುನಾವಣಾ ಪ್ರಕ್ರಿಯೆಯಲ್ಲಿ ಜಾರಿಗೆ ತರಬಾರದು ಎಂದು ಉನ್ನತಾಧಿಕಾರದ ಚುನಾವಣಾ ಮೇಲ್ವಿಚಾರಣಾ ಸಮಿತಿ ನಿರ್ದೇಶನ ನೀಡಿದೆ. ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಅಧ್ಯಕ್ಷತೆಯ ಸಮಿತಿಯು, ಚುನಾವಣೆಗಳು ಈಗಾಗಲೇ ಅನೇಕ ರಾಜ್ಯಗಳಲ್ಲಿ ಪೂರ್ಣಗೊಂಡು ಫಲಿತಾಂಶಗಳು ಪ್ರಕಟವಾಗಿರುವ ಸಂದರ್ಭದಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನವು Advocates Act, 1961 ರ ವಿಧಿಗಳಿಗೂ ಹಾಗೂ ಸುಪ್ರೀಂ ಕೋರ್ಟ್ 08.12.2025ರಂದು ನೀಡಿದ ಆದೇಶಕ್ಕೂ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಸಮಿತಿಯ ಮುಂದೆ ಭಾರತೀಯ ವಕೀಲರ ಪರಿಷತ್ತಿನ ಹೆಚ್ಚುವರಿ ಕಾರ್ಯದರ್ಶಿ ಅವನೀಶ್ ಪಾಂಡೆ ಅವರು, ಈ ನಿರ್ಣಯವು ಕೇವಲ ಒಂದು ಪ್ರಸ್ತಾವನೆ ಮಾತ್ರವಾಗಿದ್ದು, ಕಾನೂನಿನ ಪ್ರಕಾರ ಅಗತ್ಯ ಅನುಮೋದನೆ ದೊರೆತ ನಂತರವೇ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದರು. ಜೊತೆಗೆ, ವಕೀಲರ ಪರಿಷತ್ತಿಗೆ ಸಂಬಂಧಿಸಿದ ವಿಷಯಗಳು ಈಗಾಗಲೇ ಸುಪ್ರೀಂ ಕೋರ್ಟ್‌ನ ಪರಿಶೀಲನೆಯಲ್ಲಿರುವುದರಿಂದ, ಸುಪ್ರೀಂ ಕೋರ್ಟ್‌ನ ಅನುಮೋದನೆ ಇಲ್ಲದೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸಮಿತಿಯು ದಾಖಲಿಸಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ ಉನ್ನತಾಧಿಕಾರದ ಚುನಾವಣಾ ಸಮಿತಿಗಳ...

ಬಾರ್ ಕೌನ್ಸಿಲ್ ಸದಸ್ಯರ ಸಂಖ್ಯೆ ಹೆಚ್ಚಿಸಿದರೆ ಮಹಿಳಾ ಮೀಸಲಾತಿಯೂ ಅನುಪಾತದಲ್ಲಿ ಹೆಚ್ಚಬೇಕು: ಸುಪ್ರೀಂ ಕೋರ್ಟ್ ಸೂಚನೆ

Image
ನವದೆಹಲಿ, ಜುಲೈ 24: ರಾಜ್ಯ ಬಾರ್ ಕೌನ್ಸಿಲ್‌ಗಳ ಸದಸ್ಯರ ಸಂಖ್ಯೆಯನ್ನು ಚುನಾವಣೆಯ ನಂತರ ಹೆಚ್ಚಿಸುವುದಾದರೆ, ಮಹಿಳೆಯರಿಗೆ ನೀಡಬೇಕಾದ ಶೇಕಡಾ 30ರ ಮೀಸಲಾತಿಯನ್ನೂ ಅದೇ ಅನುಪಾತದಲ್ಲಿ ಹೆಚ್ಚಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮೌಖಿಕವಾಗಿ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ರಾಜ್ಯ ಬಾರ್ ಕೌನ್ಸಿಲ್ ಚುನಾವಣೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುವ ವೇಳೆ ಈ ಅಭಿಪ್ರಾಯ ವ್ಯಕ್ತವಾಯಿತು. ವಿಚಾರಣೆಯ ಸಂದರ್ಭದಲ್ಲಿ, ಜುಲೈ 19ರಂದು ನಡೆದ ಸಭೆಯಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಚುನಾವಣೆಗಳು ಪೂರ್ಣಗೊಂಡ ನಂತರ ರಾಜ್ಯ ಬಾರ್ ಕೌನ್ಸಿಲ್‌ಗಳ ಆಯ್ಕೆಯಾದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ತೀರ್ಮಾನಿಸಿರುವುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, "ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿದರೆ, ಮಹಿಳೆಯರಿಗೆ ನೀಡಬೇಕಾದ ಶೇಕಡಾ 30ರ ಮೀಸಲಾತಿಯನ್ನೂ ಅದೇ ಅನುಪಾತದಲ್ಲಿ ಹೆಚ್ಚಿಸಬೇಕಾಗುತ್ತದೆ" ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟರು. BCI ಪರ ವಕೀಲರು ಈ ಕುರಿತು ನಿರ್ದೇಶನಗಳನ್ನು ಪಡೆಯಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಮುಂದಿನ ವಾರ ವಿಚಾರಣೆಯನ್ನು ಮುಂದುವರಿಸುವುದಾಗಿ ತಿಳಿಸಿತು. ಗಮನಾರ್ಹವಾಗಿ, ಸುಪ್ರೀಂ ಕೋರ್ಟ್ 2025ರ ಡಿಸೆಂಬರ್‌ನಲ್ಲಿ ...

ರಾಜ್ಯ ವಕೀಲರ ಪರಿಷತ್ ಸದಸ್ಯರ ಸಂಖ್ಯೆ 32ಕ್ಕೆ ಏರಿಕೆ. ಭಾರತೀಯ ವಕೀಲರ ಪರಿಷತ್ ಚಿಂತನೆ

Image
ರಾಜ್ಯ ಬಾರ್ ಕೌನ್ಸಿಲ್‌ಗಳ ಚುನಾವಣೆಯಲ್ಲಿ ಮಹಿಳೆಯರಿಗೆ ನಿಗದಿಪಡಿಸಿರುವ ಪ್ರತಿನಿಧಿತ್ವವನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಈಗಿರುವ ಕಾನೂನುಬದ್ಧ ಚುನಾಯಿತ ಸದಸ್ಯರ ಸಂಖ್ಯೆಯನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಬಾರದು ಅಥವಾ ಈಗಾಗಲೇ ಗೆದ್ದಿರುವ ಅಭ್ಯರ್ಥಿಗಳನ್ನು ಹೊರಗಿಡಬಾರದು ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಸ್ಪಷ್ಟಪಡಿಸಿದೆ. ಜುಲೈ 19, 2026ರಂದು ನಡೆದ ತನ್ನ ಸಾಮಾನ್ಯ ಮಂಡಳಿ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯವನ್ನು ಆಧರಿಸಿ, ಎಲ್ಲಾ ರಾಜ್ಯಗಳ ಹೈ ಪವರ್ಡ್ ಎಲೆಕ್ಷನ್ ಸಮಿತಿಗಳು ಹಾಗೂ ಚುನಾವಣಾಧಿಕಾರಿಗಳಿಗೆ ಬಿಸಿಐ ಈ ಕುರಿತು ವಿವರವಾದ ನಿರ್ದೇಶನಗಳನ್ನು ನೀಡಿದೆ. ವಕೀಲರ ಕಾಯ್ದೆ ಸೆಕ್ಷನ್ 3(2)(b)ರ ಪ್ರಕಾರ ರಾಜ್ಯ ಬಾರ್ ಕೌನ್ಸಿಲ್‌ಗಳ ಕಾನೂನುಬದ್ಧ ಚುನಾಯಿತ ಸದಸ್ಯರ ಸಂಖ್ಯೆ 15, 20 ಅಥವಾ 25 ಆಗಿರುತ್ತದೆ. ಈ ಸಂಖ್ಯೆಯನ್ನು ಯಾವುದೇ ರೀತಿಯಲ್ಲಿ ಕಡಿಮೆ ಮಾಡಬಾರದು. ಅಂತಿಮ ಮತ ಎಣಿಕೆಯಲ್ಲಿ ಮೊದಲ 15, 20 ಅಥವಾ 25 ಸ್ಥಾನಗಳನ್ನು ಪಡೆದ ಅಭ್ಯರ್ಥಿಗಳನ್ನೇ ಮೊದಲು ಚುನಾಯಿತರಾಗಿ ಪರಿಗಣಿಸಬೇಕು ಎಂದು ಬಿಸಿಐ ತಿಳಿಸಿದೆ. ಈ ಮೊದಲ ಪಟ್ಟಿಯಲ್ಲಿರುವ ಮಹಿಳಾ ಅಭ್ಯರ್ಥಿಗಳನ್ನು ಮಹಿಳಾ ಪ್ರತಿನಿಧಿತ್ವಕ್ಕೆ ಪೂರ್ಣವಾಗಿ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ನಿಗದಿತ ಮಹಿಳಾ ಪ್ರತಿನಿಧಿತ್ವದಲ್ಲಿ ಇನ್ನೂ ಕೊರತೆ ಉಳಿದಿದ್ದರೆ ಮಾತ್ರ, ಅಂತಿಮ ಮತದಾನದ ಕ್ರಮಾಂಕದ ಆಧಾರದ ಮೇಲೆ ಹೆಚ್ಚುವರಿ ಮಹಿಳಾ ಅಭ್ಯರ್ಥಿಗಳನ್ನು ಪರಿಗಣಿ...

ಲೋಕ ಅದಾಲತ್‌ಗಳು: ಅಂಕಿಅಂಶಗಳ ಆತುರ ನ್ಯಾಯದಾನಕ್ಕೆ ಅಡ್ಡಿಯಾಗಬಾರದು

Image
ಎಸ್. ಬಸವರಾಜ್, ಹಿರಿಯ ವಕೀಲರು, ಬೆಂಗಳೂರು. ಇತ್ತೀಚೆಗೆ ನಾನು “The Growing Challenge of Challenging Lok Adalat Awards: Defeating the Spirit of Consensual Justice” ಎಂಬ ಶೀರ್ಷಿಕೆಯಡಿ ಒಂದು ಲೇಖನ ಬರೆದಿದ್ದೆ. ಆ ಲೇಖನದಲ್ಲಿ ಲೋಕ ಅದಾಲತ್‌ಗಳ ತೀರ್ಪುಗಳು ಹಾಗೂ ರಾಜಿ ಒಪ್ಪಂದಗಳನ್ನು ಪ್ರಶ್ನಿಸುವ ವ್ಯಾಜ್ಯಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆತಂಕಕಾರಿ ಬೆಳವಣಿಗೆಯನ್ನು ಚರ್ಚಿಸಿದ್ದೆ. ಅನೇಕ ದುರುದ್ದೇಶದ ವ್ಯಾಜ್ಯಗಾರರು ಸ್ವಇಚ್ಛೆಯಿಂದ ರಾಜಿಗೆ ಒಪ್ಪಿಕೊಂಡ ನಂತರವೇ, ವಿವಿಧ ಪ್ರೇರಿತ ಹಾಗೂ ಕಪಟ ಕಾರಣಗಳನ್ನು ಮುಂದಿಟ್ಟುಕೊಂಡು ಅದೇ ರಾಜಿಯನ್ನು ಪ್ರಶ್ನಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಆ ಲೇಖನವನ್ನು ಈ ಕೆಳಗಿನ ಕೊಂಡಿಯಲ್ಲಿ ಓದಬಹುದು: https://www.dakshalegal.com/news/actionView/af2452575a81edbbfbf95660 ಆದರೆ ಈ ವಿಷಯಕ್ಕೆ ಇನ್ನೊಂದು ಮುಖವೂ ಇದೆ. ಲೋಕ ಅದಾಲತ್‌ಗಳನ್ನು ಅತ್ಯಂತ ಉನ್ನತ ಉದ್ದೇಶದಿಂದ ಸ್ಥಾಪಿಸಲಾಯಿತು—ವ್ಯಾಜ್ಯಗಾರರಿಗೆ ಸರಳ, ಕಡಿಮೆ ವೆಚ್ಚದ, ಶೀಘ್ರ ಮತ್ತು ಸೌಹಾರ್ದಯುತ ವಿವಾದ ಪರಿಹಾರ ವ್ಯವಸ್ಥೆಯನ್ನು ಒದಗಿಸುವ ಸಲುವಾಗಿ. ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಅತ್ಯಂತ ಯಶಸ್ವಿ ಪ್ರಯೋಗಗಳಲ್ಲಿ ಲೋಕ ಅದಾಲತ್‌ಗಳು ಪ್ರಮುಖ ಸ್ಥಾನ ಪಡೆದಿವೆ. ಪ್ರತಿವರ್ಷ ಲಕ್ಷಾಂತರ ಪ್ರಕರಣಗಳು ಲೋಕ ಅದಾಲತ್‌ಗಳಲ್ಲಿ ರಾಜಿ ಮೂಲಕ ಇತ್ಯರ್ಥವಾಗುತ್ತವೆ. ಇದರಿಂದ ನ್ಯಾಯಾಲಯಗಳ ಮೇಲಿನ...

ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಣಕಾಸಿನ ವಿವರ. ವಕೀಲರ ಹಣ ಕೂಡಿಟ್ಟು ಕಾಪಾಡಿದ್ದ ಹಿರಿಯರು.

Image
ಎಸ್. ಬಸವರಾಜ್, ನಿರ್ಗಮಿಸುತ್ತಿರುವ ಸದಸ್ಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್  ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನನ್ನ ಸದಸ್ಯತ್ವಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿವೆ. ಹಿರಿಯ ಸದಸ್ಯರೊಂದಿಗೆ ಸಂವಾದ ನಡೆಸಿ ಈ ಮಾಹಿತಿಯನ್ನು ನೀಡುತ್ತಿದ್ದೇನೆ. ನಿಮ್ಮ ಪರಿಷತ್ತು ಇಂದು ದೇಶದಲ್ಲಿಯೇ ಅತ್ಯಂತ ಶ್ರೀಮಂತವಾದ ವಕೀಲರ ಪರಿಷತ್ತು. ಇದಕ್ಕೆ ಪ್ರಮುಖ ಕಾರಣ, ಹಿಂದಿನ ಸದಸ್ಯರು ಅತ್ಯಂತ ಜೋಪಾನವಾಗಿ ಹಣವನ್ನು ಸಂಗ್ರಹಿಸಿ, ಅನಗತ್ಯ ಖರ್ಚುಗಳನ್ನು ಮಾಡದೆ ಉಳಿಸಿಟ್ಟಿರುವುದು. ಶ್ರೀ. ಜಯಕುಮಾರ ಪಾಟೀಲ್, ಶ್ರೀ. ಸದಾಶಿವ ರೆಡ್ಡಿ, ಶ್ರೀ. ಮುನಿಯಪ್ಪ ಹಾಗೂ ನಾನು ಕಂಡಂತೆ ಶ್ರೀ. ಕೆ. ಬಿ. ನಾಯಕ್, ಶ್ರೀ. ಅನಿಲ್ ಕುಮಾರ್ ಮತ್ತು ಶ್ರೀ. ಮೋಟಕಪಲ್ಲಿ ಕಾಶಿನಾಥ್ ಅವರುಗಳು ಯಾವತ್ತೂ ದುಂದುವೆಚ್ಚ ಮಾಡದೆ ಹಣವನ್ನು ಉಳಿಸಿದ್ದಾರೆ. ಇಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿರುವ ಹಣದ ವಿವರ ಈ ರೀತಿ ಇದೆ. (ಈ ವಿವರಗಳನ್ನು ನಾನು ಸುಮಾರು ಆರು ತಿಂಗಳ ಹಿಂದೆ ಸದಸ್ಯನಾಗಿದ್ದಾಗ ದಾಖಲೆಗಳನ್ನು ಪರಿಶೀಲಿಸಿ ಪಡೆದಿದ್ದೇನೆ.) 1. ಕರ್ನಾಟಕ ರಾಜ್ಯ ವಕೀಲರ ಕಲ್ಯಾಣ ನಿಧಿ – ರೂ. 1,05,62,53,629  (ನೂರೈದು ಕೋಟಿ ಅರವತ್ತೆರಡು ಲಕ್ಷ ಐವತ್ತಮೂರು ಸಾವಿರ ಆರುನೂರ ಇಪ್ಪತ್ತೊಂಬತ್ತು ರೂಪಾಯಿಗಳು). 2. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನಿಧಿ – ರೂ. 38,63,87,854  (ಮೂವತ್ತೆಂಟು ಕೋಟಿ ಅರವತ್ತಮೂರು ಲಕ್ಷ ಎಂಬತ್ತೇಳು ಸಾವಿ...