ಬಸವಣ್ಣನ ವಚನದಲ್ಲಿ ಕಾನೂನು ಮತ್ತು ಭಾರತೀಯ ದ0ಡ ಸ0ಹಿತೆ.
ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ, ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ.
ಮೇಲಿನ ವಚನಕ್ಕೆ ಸಂಬಂಧಿಸಿದಂತೆ ಭಾರತೀಯ ದ0ಡ ಸ0ಹಿತೆ ಅಡಿಯಲ್ಲಿ ಬರುವ ವಿಭಾಗಗಳು.
೧)ಕಳಬೇಡ - ಕಳ್ಳತನ ಮಾಡಬೇಡ ಇದು ಐಪಿಸಿ ಸೆಕ್ಷನ್- 378ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.
೨) ಕೊಲಬೇಡ, ಜೀವಹತ್ಯೆ ಮಾಡಬೇಡ - ಇದು ಐಪಿಸಿ ಸೆಕ್ಷನ್- 300ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.
೩)ಹುಸಿಯ ನುಡಿಯಲು ಬೇಡ - ಸುಳ್ಳು ಹೇಳಬೇಡ ಇದು ಐಪಿಸಿ ಸೆಕ್ಷನ್ - 415 ಮತ್ತು 420ರ ಪ್ರಕಾರ ಅಪರಾಧವಾಗಿದೆ.
೪)ಮುನಿಯಬೇಡ- ಇದು ಐಪಿಸಿ ಸೆಕ್ಷನ್ - 319ರ ಪ್ರಕಾರ ಇದು ಇನ್ನೊಬ್ಬರ ಮನಸ್ಸಿದೆ ನೋವುಂಟು (hurt) ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.
೫)ಅನ್ಯರಿಗೆ ಅಸಹ್ಯಪಡಬೇಡ- ಇದು ಐಪಿಸಿ ಸೆಕ್ಷನ್- 295, 295A, 296, 297, 298,ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ
೬) ತನ್ನ ಬಣ್ಣಿಸಬೇಡ- ಇದು ಐಪಿಸಿ ಸೆಕ್ಷನ್-192 ಪ್ರಕಾರ ತನ್ನ ಬಣ್ಣಿಸಿಕೊಂಡು ಸುಳ್ಳು ಸಾಕ್ಷಿ ಹೇಳಿಕೊಳ್ಳುವುದು ಇದು ಅಪರಾಧವಾಗಿದೆ.
೭)ಇದಿರ ಹಳಿಯಲು ಬೇಡ. ಇದು ಐಪಿಸಿ ಸೆಕ್ಷನ್ -499ರ ಪ್ರಕಾರ ಇದು ಮಾನನಷ್ಟ, ಮೊಕದ್ದಮೆ ಅಪರಾಧವಾಗಿದೆ.
ಈ ಸಪ್ತಸೂತ್ರಗಳನ್ನು ಅಳವಡಿಸಿಕೊಂಡಲ್ಲಿ
ನಿನಗಾವ ಭಯವಿಲ್ಲ,
ಇದೇ ಅಂತರಂಗಶುದ್ಧಿ,
ಇದೇ ಬಹಿರಂಗಶುದ್ಧಿ ,
ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ, ಎಂದು ಹೀಗೆ ಜಗತ್ತಿನ ಯಾರೂ ಯೋಚಿಸದ ಯೋಜಿಸದ ರೀತಿಯಲ್ಲಿ, ೯೦೦ ವರ್ಷಗಳ ಹಿಂದೆಯೇ ಕಾನೂನು,ಸಂವಿಧಾನ, ಪ್ರಜಾಪ್ರಭುತ್ವ, ಸಮಾನತೆ, ಅರ್ಥಿಕತೆ, ಶಿಕ್ಷಣ, ಜ್ಞಾನ ವಿಜ್ಞಾನದ ಪರಿಕಲ್ಪನೆಯಲ್ಲಿ ಅನುಭವ ಮಂಟಪ ಎಂಬ ಸಂಸತ್ತನ್ನು ರಚಿಸಿ ಅಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಿ ಪ್ರಸ್ಥಾಪಿಸಿ ಅನುಷ್ಟಾನಕ್ಕೆ ತಂದರು ಬಸವಾದಿ ಶರಣರು,
ಯಾವ ದೇಶದಲ್ಲೂ , ಎಲ್ಲೂ ಕೂಡ, ಯಾವ ಕಾನೂನು ರಚನೆಯಾಗದ ಮುನ್ನವೇ ಈ ರೀತಿಯಲ್ಲಿ ಅತ್ಯಂತ ವೈಜ್ಞಾನಿಕವೂ, ಸರ್ವಕಾಲಿಕ ಸತ್ಯವೂ, ವಾಸ್ತವವೂ ಆದ ವಚನಗಳ ಮೂಲಕ ಜನರಲ್ಲಿ ಜಾಗ್ರತಿ ಮೂಡಿಸಿದ,
ಜಗತ್ತಿನ ಪ್ರಥಮ ಪ್ರಜಾಸತ್ತಾತ್ಮಕ ಚಿಂತಕರು ದಾರ್ಶನಿಕರು ಯಾರೆಂದರೆ, ಅವರೇ ಭಾರತವನ್ನು ವಿಶ್ವಗುರುವಾಗಿಸಿದ ಮಹಾಮಾನವತಾವಾದಿ,
(ಲೇಖಕರು ಯಾರು ಗೊತ್ತಿಲ್ಲ. ಹಿರಿಯ ವಕೀಲರು ಪ್ರೊ. ರವಿವರ್ಮ ಕುಮಾರ್ ಕಳಿಸಿದ್ದು. )

ಇದನ್ನು ಶರಣರಾದ ಅರವಿಂದ ಜತ್ತಿ ಅವರು ಹೇಳುತ್ತಿರುತ್ತಾರೆ, ಎರಡು ದಶಕಗಳಿಂದ..ನಾನು ಕೇಳಿರುವಂತೆ ಸರ್..
ReplyDelete